ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಬೆಂಗಳೂರು, ಹಾಗೂ ಮೈಸೂರು ಅಸೋಸಿಯೇಷನ್ ಮುಂಬಯಿ, ಆಯೋಜಿಸಿದರು : ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಸಾಹಿತ್ಯದ ಕುರಿತು ವಿಚಾರ ಸಂಕಿರಣ !

2020  ರ ಫೆಬ್ರವರಿ ೧೬, ರವಿವಾರದಂದು ಬೆಳಿಗ್ಯೆ ೧೦ ರಿಂದ ಸಾಯಂಕಾಲ ೫ ರ ವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ೧. ಉದ್ಘಾಟನಾ ಸಮಾರಂಭ ಗೋಷ್ಠಿ.

ಜಿ ಎಸ್ ಎಸ್ ರವರ ಕಾವ್ಯ ಲೋಕ, ಕಾವ್ಯ ಗಾನ -೧

ಗೋಷ್ಠಿ-೨. ಜಿ. ಎಸ್ ಎಸ್ ರವರ ಕಾವ್ಯ ಚಿಂತನೆ ಮತ್ತು ವಿಚಾರ ವಿಮರ್ಶೆ

ಕಾವ್ಯ ಗಾಯನ-೨

ಸಮಾರೋಪ ಸಮಾರಂಭ :

two

vy

20200216_105934

DSC_0074DSC_0040DSC_0029DSC_0044DSC_0038DSC_0056DSC_0028DSC_0058DSC_0014DSC_0022DSC_0070DSC_0031DSC_0062DSC_0061DSC_0027DSC_0018DSC_0050DSC_0069DSC_0047DSC_0026DSC_0073DSC_0065DSC_0037DSC_0072

This slideshow requires JavaScript.

This slideshow requires JavaScript.

GSS

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಶ್ರೀಮತಿ ವೀಣಾ ಶಾಸ್ತ್ರಿಯವರು ಜಿಎಸ್ಸೆಸ್ ಅವರ ಈ ಕೆಳಗಿನ ಗೀತೆಯನ್ನು ಹಾಡಿ ಎಲ್ಲರ ಮನಸ್ಸನ್ನು ರಂಜಿಸಿದರು.

ಬೇಡಿಕೆ :

ನಿನ್ನಡಿಯ ಹುಡಿ ನನ್ನ

ಮುಡಿಯ ಸಿಂಗರಿಸಿರಲಿ,

ಕಡೆಗಾನು ಹುಡಿಯಾಗಿ

ನಿನ್ನಡಿಗೆ ಸಲಲಿ.

ನಿನ್ನೊಲವಿನಂಬುಧಿಗೆ
ನನ್ನೆದೆಯ ಕರೆಯತೊರೆ

ಸಂತತವು ಹೊನಲಾಗಿ

ಹರಿಯುತಿರಲಿ.

ನಿನ್ನ ಕರುಣೆಯ ಕಿರಣ

ನಾನೆಂಬ ಹಿರಿಮಂಜ

ಕರಗಿಸುತ ಹೊಳೆ ಹೊಳೆದು

ಬೆಳಗುತಿರಲಿ.

ನನ್ನ ದೋಷಗಳೆಲ್ಲ

ನಿನ್ನ ಕ್ಷಮೆಯಾಯುಧದಿ

ಸಿಡಿಸಿಡಿದು ಹುಡಿಯಾಗಿ

ಹೋಗುತಿರಲಿ.

ಮುನ್ನ ಗುಣಗಳನುಳಿದು

ನಿನ್ನ ಗುಣದಲಿ ಬೆರೆದು

ಹೊಳೆ ಕಡಲಿಗಿಳಿವಂತೆ

ನಾನಳಿಯಲಿ.

– ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಪುಸ್ತಕ: ಸಮಗ್ರ ಕಾವ್ಯ

ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕೃಪೆ: ಕಣಜ 

ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಈ ಕವಿತೆ ಅವರ ಕೊನೆಯಾಸೆಯಂತೆ ತೋರುತ್ತಿದೆ! ಇವರಿಗೆ ನಮ್ಮ ಮನದುಂಬಿದ ಕಂಬನಿಗಳು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ..

1 thoughts on “ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಬೆಂಗಳೂರು, ಹಾಗೂ ಮೈಸೂರು ಅಸೋಸಿಯೇಷನ್ ಮುಂಬಯಿ, ಆಯೋಜಿಸಿದರು : ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಸಾಹಿತ್ಯದ ಕುರಿತು ವಿಚಾರ ಸಂಕಿರಣ !”

ನಿಮ್ಮ ಟಿಪ್ಪಣಿ ಬರೆಯಿರಿ

This site uses Akismet to reduce spam. Learn how your comment data is processed.