ಸತ್ಯದರ್ಶನ, ಚಂದನವಾಹಿನಿಯ ಬಲು ಪ್ರಸಿದ್ಧ ಕಾರ್ಯಕ್ರಮಗಳಲ್ಲೊಂದು. ಸತತವಾಗಿ ೧೩ ವರ್ಷಗಳಕಾಲ ಕೇಳುಗರ ಆಸಕ್ತಿಗಳನ್ನು ಇನ್ನೂ ಮೊನ್ನೆ ಮೊನ್ನೆಯವರೆವಿಗೂ ಜೀವಂತವಾಗಿಟ್ಟುಕೊಂಡಿದೆ ಎಂದರೆ, ಅದರ ಪ್ರಸ್ತುತೆಯ ಮಹತ್ವವನ್ನು ಅರಿಯಬಹುದು !

This slideshow requires JavaScript.

ಸತ್ಯದರ್ಶನ ರೂಪುಗೊಂಡಿದ್ದು ಹಾಗೆಯೇ ; ನಿಧಾನವಾಗಿ, ದಾಪುಗಾಲು ಹಾಕುತ್ತಾ ಸಾಗಿದ್ದೂ, ಒಂದು ರೋಚಕ ಸಂಗತಿಯೇ  !-ಡಾ.ಪಾವಗಡ ಪ್ರಕಾಶ್ ರಾವ್

Courtesy : Dooradarshana, Chandana.

“ಸತ್ಯದರ್ಶನ ಕಾರ್ಯಕ್ರಮ ಇನ್ನು ಮುಂದೆ ದೂರದರ್ಶನದಲ್ಲಿ ಪ್ರಸಾರವಾಗುವುದಿಲ್ಲ” :

ಸತ್ಯದರ್ಶನ’ ಕಾರ್ಯಕ್ರಮ ಸಾವಿರದ ನೂರ ಹನ್ನೊಂದು (1,111) ಸಂಚಿಕೆಗಳ ನಂತರ ಅಂತ್ಯಗೊಂಡಿದ್ದು ಸತ್ಯದರ್ಶನ-ಸಹಸ್ರದರ್ಶನ ಸಹಸ್ರಾಭಿನಂದನೆ ಕಾರ್ಯಕ್ರಮವನ್ನು ಜೂ. 27 ರಂದು ಮಂಗಳವಾರ ಸಂಜೆ 6:00 ರಿಂದ ರಾತ್ರಿ 8:00 ವರೆಗೆ ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ್ ಕಾಲೇಜ್ ನ ಡಾ.ಪ್ರೇಮಚಂದ್ರ ಸಾಗರ ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ. ಆಸಕ್ತರಿಗೆಲ್ಲಾ ಆದರದ ಸ್ವಾಗತ. 

13 ವರ್ಷಗಳಿಂದ  ಚಂದನ ವಾಹಿನಿಯಲ್ಲಿ  ತಪ್ಪದೆ  ಪ್ರಸಾರವಾಗುತ್ತಿದ್ದ, ಸತ್ಯದರ್ಶನ 1,111 ಸಂಚಿಕೆಗಳನ್ನು ಪೂರೈಸಿರುವುದು ಒಂದು ಮಹತ್ವದ ಸಂಗತಿಯಾಗಿದೆ. ಜಿಜ್ಞಾಸುಗಳ ಬಗೆಹರಿಯದ ಹಲವಾರು ಸಂದೇಹಗಳನ್ನು ಸ್ಪಷ್ಟವಾಗಿ ಅರಿತುಕೊಂಡು ಮುನ್ನಡೆಯಲು ಸಹಾಯಕವಾಗಿದ್ದ  ನೆಚ್ಚಿನ ಕಾರ್ಯಕ್ರಮ ಒಮ್ಮೆಲೇ ಪ್ರಸಾರವಾಗುವುದಿಲ್ಲ  ಎಂದು ಅರಿತಾಗ  ಬಹಳ ಜನರಿಗೆ ನಿರುತ್ಸಾಹವಾಯಿತು.  ಏಕೆಂದರೆ 13 ವರ್ಷಗಳಿಂದ ಸತ್ಯದರ್ಶನ ಕಾರ್ಯಕ್ರಮದಲ್ಲಿ ಚರ್ಚೆಯಾಗದ ವಿಷಯವನ್ನು ಗುರುತಿಸುವುದೇ ಕಷ್ಟದ ಕೆಲಸ. ಸತ್ಯದರ್ಶನ ಕಾರ್ಯಕ್ರಮದಲ್ಲಿ  ಚರ್ಚೆಯಾದ ಪ್ರಶ್ನೋತ್ತರಗಳ ವ್ಯಾಪ್ತಿ ಬಹಳ ವಿಶಾಲವಾಗಿತ್ತು  ಎಲ್ಲಾ ವರ್ಗಗಳ, ಎಲ್ಲಾ ಶಾಖೆಗಳ , ಪಂಥಗಳ ಸಂದೇಹಗಳಿಗೆ ಅತ್ಯಂತ  ಸಮರ್ಪಕವಾಗಿ ಎಲ್ಲರು ಹೌದೆನ್ನುವ ರೀತಿಯಲ್ಲಿ ಪ್ರಕಾಶ್ ರಾಯರು  ಉತ್ತರ ನೀಡಿ ನಿಜವಾದ ರೀತಿಯಲ್ಲಿ ಸತ್ಯದರ್ಶನವನ್ನು ಮಾಡಿಸಿದ್ದವು. ದಿನ ನಿತ್ಯದ ಆಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಶೇಷ ಸಂದರ್ಭಗಳಲ್ಲಿ ಪಾಲನೆ ಮಾಡಬೇಕಾದ ಧರ್ಮ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಿದ್ಧಪುರುಷರು, ಅದ್ವೈತ, ದ್ವೈತ, ವಿಶಿಷ್ಠಾ ದ್ವೈತಗಳ ಬಗ್ಗೆ, ಬೌದ್ಧ, ಜೈನ, ಸಿಖ್ ಪಂಥಗಳಲ್ಲಿ ತಲೆದೋರುವ ಪ್ರಶ್ನೆಗಳಿಗೆ ವಿದ್ವಾಂಸರಾದ ಡಾ.ಪಾವಗಡ ಪ್ರಕಾಶ್ ರಾವ್ ತಮ್ಮ ಜ್ಞಾನದ ಅರಿವಿನ ನೆರವಿನಿಂದ ಸ್ಪಷ್ಟ ನಿವಾರಣೆ ಕೊಡುತ್ತಿದ್ದ ರೀತಿ ಅನನ್ಯವಾಗಿರುವುದನ್ನು ಎಲ್ಲರೂ ಮನಗಂಡಿದ್ದಾರೆ.

ಇಂದಿನ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದಕ್ಕಾಗಿಯೇ  ಬಗೆಯ ಮನರಂಜನಾ ಕಾರ್ಯಕ್ರಮಗಳು, ನಡೆಯುತ್ತಿವೆ.  ವರ್ಷಗಟ್ಟಲೆ ನಡೆಯುವ ದಾರಾವಾಹಿಗಳ ಭರಾಟೆಯಲ್ಲಿ, ಸತ್ಯದರ್ಶನದಂತಹ  ಧಾರ್ಮಿಕ ವಿಷಯಗಳಂತಹ ಸೂಕ್ಷ್ಮ, ಅತಿ ಗಂಭೀರ ಚಿಂತಕರನ್ನೇ ಪ್ರಧಾನವಾಗಿಟ್ಟುಕೊಂಡು ನಡೆಯುವ ಕಾರ್ಯಕ್ರಮ ಸತತ 13 ವರ್ಷ  ದಾಖಲೆಯ 1,111 ಸಂಚಿಕೆಗಳನ್ನು ಪೂರೈಸಿರುವುದು ಇಂದಿಗೂ ಒಂದು ವರ್ಗದ ಜನ ಇಂಥ  ಕಾರ್ಯ ಕ್ರಮಗಳಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಎನ್ನುವ ಸಂದೇಶ ಸಿಗುತ್ತಿರುವುದು 

ಕಾರ್ಯಕ್ರಮದ ಹಿಂದಿನ ಭಾವನೆಗಳೇನಾಗಿತ್ತು ? ಅದರ ರೂವಾರಿಗಳಾರು? ರೂಪುರೇಷೆ ಸಿದ್ಧಗೊಂಡಬಗೆ  ಹೇಗೆ ?

ಎನ್ನುವ ವಿಚಾರಗಳ ಬಗ್ಗೆ ಸತ್ಯದರ್ಶನ ಖ್ಯಾತಿಯ, ಕನ್ನಡಪ್ರಭ.ಕಾಂ ನ ರಾಮಾಯಣ ಅವಲೋಕನ ಅಂಕಣಕಾರರೂ ಆಗಿರುವ ಡಾ.ಪಾವಗಡ ಪ್ರಕಾಶ್ ರಾವ್ ಕನ್ನಡಪ್ರಭ.ಕಾಂ ಗೆ ಸಂದರ್ಶನ ನೀಡಿದ್ದಾರೆ. 1,111 ಸಂಚಿಕೆಗಳ ವಿಕ್ರಮವ ಸಾಧನೆಯ ವಿವರಗಳನ್ನು ಡಾ. ಪ್ರಕಾಶರಾಯರು ತಿಳಿಸಿದ್ದು ಹೀಗೆ  :

152613526468770603

ಸತ್ಯದರ್ಶನ ಕಾರ್ಯಕ್ರದ ಶುರುವಾದ ಬಗೆ ತಿಳಿಸಿ ಕಾರ್ಯಕ್ರಮದ  ಕಲ್ಪನೆ ಬಂದದ್ದಾದರೂ ಹೇಗೆ  ?

13 ವರ್ಷಗಳ ಹಿಂದೆ  “ ಹೈದರಾಬಾದ್ದೂರದರ್ಶನದ ನಿರ್ದೇಶಕರಾಗಿ  ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ವರುಲು ಅವರು ತೆಲುಗಿನಲ್ಲಿ ಧರ್ಮ ಸಂದೇಹಾಲು(ಧರ್ಮ ಸಂದೇಹ) ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿರುವ ಬಗ್ಗೆ

ಪ್ರಕಾಶ್  ರಾಯರ ಹತ್ತಿರ ಪ್ರಸ್ತಾಪಮಾಡಿ ಕನ್ನಡದಲ್ಲಿ ಅಂತಹದ್ದೇ ಒಂದು ಕಾರ್ಯಕ್ರಮ ಮಾಡುವ ಆಶೆಯಿದೆ,  ನಿಮ್ಮ ಸಹಕಾರವಿದೆಯೇ ಎಂದು ಪ್ರಶ್ನಿಸಿದಾಗ ನೂರು  ಜಿಜ್ಞಾಸುಗಳ ಪ್ರಶ್ನೆಗಳಿಗೆ  ಸಮಾಧಾನಕರವಾದ ಉತ್ತರಕೊಡಲು ಬಹಳ ಅಧ್ಯಯನ ಮಾಡಬೇಕಾಗುತ್ತೆ  ಯಾವುದಾದರೂ ಮಹಾನ್ ಗ್ರಂಥಗಳ  ಬಗ್ಗೆ ಉಪನ್ಯಾಸ ಕೊಡಲು ಸಿದ್ಧವೆಂದು ಅಭಿಪ್ರಾಯಪಟ್ಟರು  ರಾಮಾಯಣ, ಭಗವದ್ಗೀತೆಗಳಂತಹ ಉದ್ಗ್ರಂಥಗಳ ಬಗ್ಗೆ ಉಪನ್ಯಾಸ ಕೊಡುತ್ತೇನೆ ಅದನ್ನ ಮಾಡಿಸಿ ಎಂದೆ. ಸರಿ  ಅವುಗಳನ್ನೇ  ಮಾಡಿ ಎಂದು ಒತ್ತಾಯಿಸಿದರು. ಜಿವಿ ಅಯ್ಯರ್ ಹೀಗೆ ಆರಂಭವಾದ ಸತ್ಯದರ್ಶನದ  ಕಾರ್ಯಕ್ರಮದ ಮೊಟ್ಟ ಮೊದಲನೆಯ ಉದ್ಘಾಟನಾ ಭಾಷಣ ಮಾಡಿದ್ದರು. 

ಆಗೆಲ್ಲಾ  14 ಸಂಚಿಕೆಗಳ ಮಿತಿ ಇತ್ತು. ಆದರೆ 108 ಕ್ಕೆ ನಿಲ್ಲಿಸಬೇಕು ಎಂದುಕೊಂಡಿದ್ದೆವು. 108 ಸಂಚಿಕೆ ಪೂರೈಸಿದ್ದರ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಬಂದಿದ್ದರು. ಅದೇ ಕಾರ್ಯಕ್ರಮದಲ್ಲಿ ಸತ್ಯದರ್ಶನ ಮುಕ್ತಾಯವಾಗುತ್ತೆ ಎಂದು ಹೇಳಿದ್ದೆವು. ಆದರೆ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಮುಂದುವರೆಸಬೇಕೆಂದು ಒತ್ತಾಯಿಸಿದರು. ಈಗ ಮುಂದುವರೆದು 13 ವರ್ಷಕ್ಕೆ ಬಂದು ನಿಂತಿದೆ.

152613526468770603

ಸತ್ಯದರ್ಶನಕ್ಕೆ ಬರುತ್ತಿದ್ದ ಪತ್ರಗಳ  ಆಯ್ಕೆಬಗ್ಗೆ ತಿಳಿಸಿ …? 

“ಮೊದಲ ಹಂತದಲ್ಲಿ ಒಂದಷ್ಟು ಪತ್ರಗಳನ್ನು ಆಯ್ಕೆ ಮಾಡುತ್ತಿದ್ದರು. ಆ ನಂತರ ನನಗೆ ಒಂದಷ್ಟು ಕೊಡುತ್ತಿದ್ದರು. ಕೆಲವು ವಿಷಯಗಳ ಬಗ್ಗೆ  ನನಗು ಸಂಪೂರ್ಣ ಮಾಹಿತಿ ಗೊತ್ತಿರುತ್ತಿರಲಿಲ್ಲ   ಉತ್ತರಗಳು ಅಧಿಕೃತವಾಗಿರಬೇಕು. ಸತ್ಯವಾಗಿರಬೇಕು. ಅದಕ್ಕಾಗಿ ಹೆಚ್ಚಿನ  ಅಧ್ಯಯನಮಾಡಬೇಕಾಯಿತು . ತಪಸ್ಸು ಮಾಡ್ಡಿದಷ್ಟೇ ಕಷ್ಟಕರ ಕೆಲಸ .

ವಿಚಾರಗಳ ಬಗ್ಗೆ ಅಧ್ಯಯನ ಮಾಡುತ್ತೇನೆ. ಅಧ್ಯಯನ ಮಾಡಿ, ಸೂಕ್ತ ಅಂತ ಅನ್ನಿಸಿದ್ದನ್ನ ಉತ್ತರ ಕೊಡುತ್ತೇನೆ.

152613526468770603

ಈಗಾಗಲೇ ಬಹಳಷ್ಟು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆಯಾಗಿದೆ ಇನ್ನು ಯಾವುದಾದರೂ ಚರ್ಚೆಯಾಗದ ಸಂಗತಿಗಳಿವೆಯೇ ?

108 ಸಂಚಿಕೆಗಳಾದ ನಂತರ ತಯಾರಿಸಿದ ಪಟ್ಟಿಯಲ್ಲಿ ಅದ್ವೈತ, ಬೌದ್ಧ, ಜೈನ, ವೀರಶೈವ, ವಿಶಿಷ್ಠಾದ್ವೈತ, ದ್ವೈತ, ಸಿಖ್ ಪಂಥಗಳಿದ್ದವು. ದರ್ಶನಗಳ ಪೈಕಿ ಸಾಂಖ್ಯ, ಕಣಾದರ ದರ್ಶನ, ಗೌತಮರ ನ್ಯಾಯ, ಯೋಗಸೂತ್ರ, ಪೂರ್ವ ಮೀಮಾಂಸೆ ಇತ್ತು. ಹಲವಾರು ದ್ವೈತ ಮುಖಂಡರು ನಮ್ಮ ಚಂದನಕ್ಕೆ ಕಾಗದ ಬರೆದು, ಪ್ರಕಾಶ್ ರಾಯರು ದ್ವೈತದ ಬಗ್ಗೆ ಮಾತನಾಡಬಾರದು ಎಂದರೆ ಅದ್ಯಾಕೆ ಗೊತ್ತಿಲ್ಲ ಅವರಿಗೆ ಬಹುಶಃ ನಾನು ಅದರ ಬಗ್ಗೆ ದೋಷಾರೋಪಣೆ ಮಾಡುತ್ತೀನಿ ಎನಿಸಿರಬೇಕು. ಆದರೆ ನಾನು ಹಾಗೆ ಮಾಡುತ್ತಲೂ ಇರಲಿಲ್ಲ. ನಮಗೆ ತ್ರಯಾಚಾರ್ಯರೂ ಸಮಾನರೇ. ಆದರೆ ಮಾತನಾಡಬೇಕು ಅಂತ ಅಂದುಕೊಂಡಿದ್ದ ಮತ್ತೊಂದು ಆಗಿಲ್ಲ. ಅದೇನು ಅಂದ್ರೆ ಕನ್ನಡ ಸಾಹಿತ್ಯ. 1,100 ವರ್ಷಗಳವರೆಗಿನ ಕನ್ನಡ ಸಾಹಿತ್ಯ ಚರಿತ್ರೆ ಇದೆ ನಮ್ಮಲ್ಲಿ. ನನಗೆ ಪಂಪನಿಂದ ಕುವೆಂಪು ವರೆಗೆ ಒಂದು 500 ಸಂಚಿಕೆಗಳನ್ನ ಮಾಡಬೇಕು ಎಂಬ ಇಷ್ಟ ಇತ್ತು. ಕನ್ನಡ ಸಾಹಿತ್ಯದ ದಿಗ್ದರ್ಶನವನ್ನು ಮಾಡಬೇಕು ಎಂಬ ಇಷ್ಟವಿತ್ತು. ಪಂಪನಿಂದ ಕುವೆಂಪು ವರೆಗೆ ಮಾತನಾಡಿ ದಾಖಲು ಮಾಡಬೇಕು ಅಂದುಕೊಂಡಿದ್ದಿದ್ದೆ. ಹಲ್ಮಿಡಿ ಶಾಸನದಿಂದ ಆರಂಭವಾಗಿ, ನವ್ಯ ಸಾಹಿತ್ಯದ ವರೆಗೂ ಲಭ್ಯವಿರುವ ಅಂಶಗಳನ್ನು ಯಾವ ಕನ್ನಡ ವಾಹಿನಿಯೂ ಬಳಸಿಕೊಂಡಿಲ್ಲ. ಅದನ್ನು ಮಾಡಬೇಕು ಎಂದುಕೊಂಡಿದ್ದೆ. ಈಗಲೂ ಆಸಕ್ತ ಪ್ರಾಯೋಜಕರಿದ್ದರೆ ಮಾಡುವ ಮನಸ್ಸಿದೆ.

152613526468770603

ಉದ್ವಿಗ್ನತೆಯಿಂದ ವಿರೋಧ ವ್ಯಕ್ತಪಡಿಸುತ್ತೇವೆ, ರೋಚಕತೆಯ ಬೆನ್ನಟ್ಟಿ ಮೂಲತತ್ವವನ್ನು ಮರೆಯುತ್ತಿದ್ದೇವೆ, ಈ ನಿಟ್ಟಿನಲ್ಲಿ ಸತ್ಯದರ್ಶನದಂತಹ ಕಾರ್ಯಕ್ರಮಗಳ ಪಾತ್ರವೇನು?

ನಾನು ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಉದಾಹರಣೆ ಹೇಳುತ್ತೇನೆ. ನೀವು ಜಿಜ್ಞಾಸು ಆದರೆ ತಪ್ಪಿಲ್ಲ. ಸಂದೇಹ ಪಟ್ಟರೆ ತಪ್ಪಿಲ್ಲ.ಸಾಧಾರವಾಗಿ ವಿರೋಧಿಸಿದರೆ ತಪ್ಪಿಲ್ಲ. ನಂಬಿಕೆಯೇ ಇಲ್ಲದೇ ಇದ್ದರೆ ತಪ್ಪಿಲ್ಲ. ಆದರೆ ಕೇವಲ ವಿರೋಧಿಸಬೇಕು ಅನ್ನುವ ಕಾರಣದಿಂದ ದೇವರುಗಳ ಬಗ್ಗೆ ವಿರೋಧಿಸುವುದು ಆ ಒಂದು ಕಾರಣದಿಂದ ವಿರೋಧಿಸುವುದು ಇದನ್ನು ಖಂಡಿಸುತ್ತಾ ಬಂದಿದ್ದೇನೆ. ವಿರೋಧಿಸುವಂತಿದ್ದರೆ, ಸಾಧಾರವಾಗಿ ವಿರೋಧಿಸಿ. ಬೇರೆ ವಿದ್ವಾಂಸರು ಏನು ಹೇಳಿದ್ದಾರೆ, ಅದರ ಬಗ್ಗೆ ನನ್ನ ಜ್ಞಾನದ ಮಿತಿಯೇನು ಎಂಬುದನ್ನೇನೂ ಅರಿಯದೇ ಸುಮ್ಮನೇ ಭಗವದ್ಗೀತೆಯಂತಹ ಗ್ರಂಥಗಳನ್ನು ಸುಡುತ್ತೇನೆ ಎನ್ನುವುದು ಸರಿಯಲ್ಲ. ಅಂತೆಯೇ ಮೂಲ ಗ್ರಂಥಗಳ ರಚನೆಯಲ್ಲಿ ಇಲ್ಲದ ಅಂಶಗಳನ್ನು, ಮತ್ತೆ ಯಾವುದೋ ಗ್ರಂಥಗಳಿಂದ ಹೆಕ್ಕಿ ಸುಳ್ಳು ಮಾಹಿತಿ ನೀಡಿ ಸ್ಥಾಪಿಸುವುದು ಸರಿಯಲ್ಲ. ನಮಗೆ ವಾಲ್ಮೀಕಿ ವಿರಚಿತ ರಾಮಾಯಣ ಮಾನ್ಯವೇ ಹೊರತು, ಬೇರೆ ಬೇರೆ ರಾಮಾಯಣಗಳು ನಮಗೆ ಮಾನ್ಯವಲ್ಲ. 

ಅಗಸ್ತ್ಯರ ಆತಿಥ್ಯದಲ್ಲಿದ್ದ ಶ್ರೀರಾಮರು ಗೋಮಾಂಸ ಸೇವಿಸಿದರೆಂಬುದಾಗಲೀ ಅಥವಾ ಇಂತಹ ಯಾವುದೇ ಅಂಶಗಳು ಮೂಲದಲ್ಲಿ ಇಲ್ಲ. ನನಗೆ ಮಾಂಸದ ಊಟದ ಬಗ್ಗೆ ವಿರೋಧವಿಲ್ಲ ಇಂತಹದ್ದೇ ವಿಷಯಗಳನ್ನು ಸತ್ಯದರ್ಶನ ಮಾಡಿಸಬೇಕು.  ಆ ರೀತಿಯ ಸತ್ಯದರ್ಶನ ನನಗೆ 100 ಕ್ಕೆ 90 ಭಾಗ ಸಂತೋಷ ನೀಡಿದೆ. ಸಾಕಷ್ಟು ಪ್ರಚಾರ, ಸಂಭಾವನೆಯೂ ದೊರೆತಿದೆ. ದೂರದರ್ಶನದಲ್ಲಿ ಸತ್ಯದರ್ಶನ ಪ್ರಚಾರವಾಗುತ್ತಿದ್ದಂತೆಯೆ ಹೊರಗಡೆ ಉಪನ್ಯಾಸಕ್ಕೂ ಹೆಚ್ಚು ಮಾನ್ಯತೆ ಸಿಕ್ಕಿತು. ಇದು ದೂರದರ್ಶನದಿಂದ ನನಗೆ ಆದ ಉಪಕಾರ. ಈ ಉಪಕಾರಕ್ಕಾಗಿ ಸತ್ಯದರ್ಶನವನ್ನು ಸೃಷ್ಟಿಸಿದ ವೆಂಕಟೇಶ್ವರುಲು ಅವರನ್ನು ನೆನಪಿಸಿಕೊಂಡು ಇಲ್ಲಿಯವರೆಗೆ ಬೆಳೆಸಿಕೊಂಡು ಬಂದ ಮಹೇಶ್ ಜೋಷಿಗಳಿಗೆ ಕೃತಜ್ಞನಾಗಿದ್ದೇನೆ.

152613526468770603

13 ವರ್ಷ ವಿವಾದ ರಹಿತವಾಗಿ ನಡೆಸಿದರಲ್ಲ ಅದು ಹೇಗೆ ಸಾಧ್ಯವಾಯಿತು?

ಅದು ಸಾಧ್ಯವಾಗಿದ್ದರೆ ನಾನು ಯಾವುದೇ ಇಸಂ ಗೆ ಅಂಟಿಕೊಳ್ಳದೇ ಇರುವುದು ಪ್ರಧಾನವಾದ ಕಾರಣ. ನಾನು ಶುದ್ಧ ಅದ್ವೈತಿಯಾದರೂ ಭಾರತದಲ್ಲಿರುವ ಎಲ್ಲ ಧರ್ಮವನ್ನೂ ತಿರಸ್ಕರಿಸಿ ಅದ್ವೈತವನ್ನು ಮಾತ್ರ ಇಟ್ಟುಕೊಳ್ಳುವೆ ಎಂದಲ್ಲ. ವೀರಶೈವ, ಬೌದ್ಧ, ಜೈನ, ನಾಥ ಪಂಥದ ಬಗ್ಗೆ ಮಾತನಾಡುತ್ತೇನೆ. ಒಟ್ಟಾರೆ 13 ವರ್ಷಗಳ ವರೆಗೆ ಯಾವುದೇ ಇಸಂ ಗಳಿಗೆ ಅಂಟಿಕೊಳ್ಳದೇ ನನ್ನ ಅದ್ವೈತವನ್ನು ಮಂಡನೆ ಮಾಡುತ್ತಾ. ಉಳಿದೆಲ್ಲವಕ್ಕೂ ಮರ್ಯಾದೆ ನೀಡಿದ್ದರಿಂದ ವಿವಾದ ರಹಿತವಾಗಿ ನಡೆಸಿಕೊಡಲು ಸಾಧ್ಯವಾಗಿದೆ ಎನಿಸುತ್ತದೆ.

152613526468770603

ಸತ್ಯದರ್ಶನದ ಸಂಪುಟಗಳ ಬಗ್ಗೆ ಹೇಳುವಿರಾ?

ಈಗಾಗಲೇ ಎರಡು ಸಂಪುಟಗಳು ಪ್ರಕಟವಾಗಿದೆ (ಸತ್ಯಪ್ರಕಾಶ-1, 2) 3 ನೇ ಸಂಪುಟ ಪ್ರಕಟವಾಗಲಿದೆ. ಶ್ರದ್ಧೆಗಳು ನಶಿಸುತ್ತಿದ್ದು, ಅದನ್ನು ಪುನಶ್ಚೇತನಗೊಳಿಸುವ ಬಗ್ಗೆ ಭಾರತೀಯ ವಿದ್ಯಾಭವನದಲ್ಲಿ ಡಾ.ವಿರೇಂದ್ರ ಹೆಗಡೆ ಅವರು ಆಯೋಜಿಸಿದ್ದ ಶ್ರದ್ಧಾ ಪುನಶ್ಚೇತನ ಎಂಬ ಸಭೆಯಲ್ಲಿ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ವಿಶೇಷ ಸಂಚಿಕೆ ಮಾಡಿದರೆ. 2018 ರ ಮಾರ್ಚ್ ನಲ್ಲಿ ನಡೆಯಲಿರುವ ವಿಶೇಷ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮ್ಮೇಳನದಲ್ಲಿ ಪ್ರಶ್ನೋತ್ತರ ಕಲಾಪ ನಡೆಸುವಂತೆ ಸಲಹೆ ನೀಡಿದ್ದೇನೆ, ಎಲ್ಲರೂ ಎಲ್ಲಾ ಧರ್ಮ, ಶ್ರದ್ಧೆಗಳ ಬಗ್ಗೆ ಅಧ್ಯಯನ ಮಾಡಿರಬೇಕು ಹಾಗಾದಲ್ಲಿ ಮಾತ್ರ ಧರ್ಮಕ್ಕೆ ಸಂಬಂಧಿಸಿದ ಯಾವುದೆ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸಬಹುದು.

152613526468770603

ಸತ್ಯದರ್ಶನವನ್ನು ಮುಗಿಸುವ ಅನಿವಾರ್ಯತೆಯ ಬಗ್ಗೆ ನೀವು ಏನು ಹೇಳಲು ಇಚ್ಛಿಸುತ್ತೀರ ?  

ಮುಂದುವರೆಸಬಹುದಿತ್ತು. ಘೋಷಣೆ ಮಾಡಿ ಮುಕ್ತಾಯಗೊಳ್ಳಲು ಇನ್ನೊಂದು ತಿಂಗಳಿದೆ ಎನ್ನಬೇಕಾದರೆ ಅದರ ನಿರ್ಮಾಪಕರು ಸುಧಾಕರ್ ಪ್ರಿಯರಿಗೆ ಒದ್ದಾಟ ಪ್ರಾರಂಭವಾಯಿತು. ಮುಕ್ತಾಯ ಮಾಡುತ್ತಿದ್ದೇನೆ ಎಂದು ಹೇಳಬೇಡಿ, ಎಂದರು. ಹೇಳಿದರೆ ಜನ ಪ್ರಶ್ನೆ ಕೇಳಲು ಪ್ರಾರಂಭಿಸುತ್ತಾರೆ, ಎಂದರು. ಆ ಹಿನ್ನೆಲೆಯಲ್ಲಿ ಮಹೇಶ್ ಜೋಷಿಗಳೂ ಇದೇ ಪ್ರಶ್ನೆ ಕೇಳಿದ್ದರು. ಯಾಕೆ ನಿಲ್ಲಿಸಬೇಕು ಅಂದುಕೊಂಡಿದ್ದೀರಿ? ಅವರಿಗೆ ಕೊಟ್ಟ ಉತ್ತರವನ್ನು ನಾನು ನಿಮಗೂ ಕೊಡಬೇಕಿದೆ. ಸತ್ಯದರ್ಶನ ಕಾರ್ಯಕ್ರಮ ಮುಗಿಸುವುದು ಅನಿವಾರ್ಯತೆ ಎಂದು ಹೇಳುವುದಿಲ್ಲ. ಆದರೆ 13 ವರ್ಷಗಳು ಪುಟ್ಟ ಸಮಯವಲ್ಲ. 13 ವರ್ಷದಿಂದ ಪ್ರೇಕ್ಷಕರು ಇದೇ ಬಿಳಿ-ಗಡ್ಡ ನೋಡುತ್ತಿದ್ದಾರೆ.  13 ವರ್ಷಗಳು ಕೇವಲ ಧರ್ಮಕ್ಕೆ ಸಂಬಂಧಿಸಿದ್ದು ಮಾತ್ರ ಚರ್ಚೆಯಾಯಿತು. ಹೀಗಾಗಿ ನಮ್ಮ ಜೀವನದಲ್ಲಿ ಧಾರ್ಮಿಕ ವಿಷಯಗಳಿಗೆ ಜಾಗ ಎಷ್ಟಿದೆ ಎಂಬುದನ್ನು ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 13 ವರ್ಷಗಳು ಮಾಡಿದ್ದು ಸಾಕು ಎನಿಸಿತು. ಎಷ್ಟು ವರ್ಷ ಅಂತ ಒಂದೇ ಕಾರ್ಯಕ್ರಮ ನಡೆಸುವುದು? ಪ್ರೇಕ್ಷಕರಿಗೆ ಸಹನೆ ಎಷ್ಟಿದೆ?. ಅವರು ಸಾಕು ಎನ್ನುವುದಕ್ಕೆ ಮುನ್ನ ನಾವೇ ನಿಲ್ಲಿಸಲು ತೀರ್ಮಾನಿಸಿದ್ದೇವೆ. ಕನ್ನಡದ ಸಾಹಿತ್ಯದ ಬಗ್ಗೆ ಮುಂದೆ ಕಾರ್ಯಕ್ರಮ ಮಾಡುವ ಮನಸ್ಸಿದೆ. ಸೂಕ್ತ ವೇದಿಕೆ ಸಿಕ್ಕಲ್ಲಿ ಪ್ರಾರಂಭಿಸುತ್ತೇನೆ.

 
Ads by Kiosked.
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s